ಮತಾಂತರಗೊಂಡ ಹಿಂದೂ, ಬೌದ್ಧ ಹಾಗೂ ಸಿಖ್ ಧರ್ಮಕ್ಕೆ ಅನುಸರಿಸುವವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ಸಿಗುತ್ತಿದೆ. ಆದರೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೆ ಎಂಬುದನ್ನಬಾಲಕೃಷ್ಣ ಆಯೋಗ ಪರಿಶೀಲನೆ ನಡೆಸಲಿದೆ.

ದಲಿತ ಸಂಘಟನೆಗಳು ಹೇಳೋದೇನು?
ಮತಾಂತರಗೊಂಡವರಿಗೆ ಮೀಸಲಾತಿ ನೀಡುವುದಕ್ಕೆ ದಲಿತ ಸಂಘಟನೆಗಳು ಪರೋಕ್ಷ ವಿರೋಧ ವ್ಯಕ್ತಪಡಿಸಿವೆ. ಬೇರೆ ಧರ್ಮಕ್ಕೆ ಮತಾಂತರಗೊಂಡವರಿಗೆ ಮೀಸಲಾತಿ ಕೊಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಬೇರೆ ಧರ್ಮಕ್ಕೆ ಹೋದವರಿಗೂ ನಮಗೆ ನಿಗದಿಯಾಗಿರುವ ಮೀಸಲಾತಿ ಕೋಟಾದಲ್ಲಿ ನೀಡಬಾರದು. ಮತಾಂತರಗೊಂಡಿರುವ ಧರ್ಮಕ್ಕೆ ನಿಗಧಿಯಾಗಿರುವ ಮೀಸಲಾತಿಯಲ್ಲೆ ಅವರೂ ಮೀಸಲಾತಿ ಪಡೆಯಲಿ ಎಂದು ಕೆಲವು ದಲಿತ ಸಂಘಟನೆಗಳು ತಿಳಿಸಿವೆ.
ತಲಾಂತರದಿಂದ ಇರುವ ದಲಿತರಿಗೆ ಮಾತ್ರ ಮೀಸಲಾತಿ ಸಿಗಲಿ
ಈ ಬಗ್ಗೆ ಬಿಜೆಪಿ ಹಾಗೂ ದಲಿತ ಸಮುದಾಯದ ಶಾಸಕ ಸಿಮೆಂಟ್ ಮಂಜುನಾಥ್ ಪ್ರತಿಕ್ರಿಯೆ ನೀಡಿ, ಅಂಬೇಡ್ಕರ್ ಯಾರು ಯಾರಿಗೆ ಮೀಸಲಾತಿ ಕೊಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮುಸಲ್ಮಾನರಾಗಿ, ಕ್ರೈಸ್ತ ರಾಗಿ ಧರ್ಮ ಸ್ವೀಕಾರ ಮಾಡ್ತಾರೋ ಅವರಿಗೆ ಮೀಸಲಾತಿ ಕೊಡಬಾರದು. ತಲಾಂತರದಿಂದ ಇರುವ ದಲಿತರಿಗೆ ಮಾತ್ರ ಮೀಸಲಾತಿ ಕೊಡಬೇಕು ಎಂದು ತಿಳಿಸಿದರು.
ಜಾತಿಯ ನಿಲುವು ಹೊರತು ಪಕ್ಷದ ನಿಲುವಲ್ಲ
ಬೌದ್ಧ ಧರ್ಮಕ್ಕೆ ಮತಾಂತರ ಆದವರ ಬಗ್ಗೆ ನಮ್ದು ಯಾವುದೇ ತಕರಾರು ಇಲ್ಲ. ವಾಸ್ತವ ಅಂಶವನ್ನು ನ್ಯಾಯಮೂರ್ತಿ ಬಾಲಕೃಷ್ಣನ್ ಆಯೋಗದ ಮುಂದೆ ತಿಳಿಸಿದ್ದೇವೆ. ಇದೊಂದು ನಮ್ಮ ಜಾತಿಯ ನಿಲುವು ಹೊರತು ಪಕ್ಷದ ನಿಲುವಲ್ಲ. ಇದರ ಬಗ್ಗೆ ಪಾರ್ಟಿಯವರು ನಮಗೆ ನಿರ್ದೇಶನ ಕೊಟ್ಟಿಲ್ಲ. ನಮ್ಮ ಸಮುದಾಯದ ನಿಲುವನ್ನು ನಾವು ಸ್ಪಷ್ಟ ಪಡಿಸಿದ್ದೇವೆ. ಎಲ್ಲಾ ದಲಿತ ಸಂಘಟನೆಗಳು ಕೂಡ ಇದೇ ನಿಲುವನ್ನು ತಿಳಿಸಿದ್ದಾರೆ. ನ್ಯಾಯಮೂರ್ತಿಗಳು ಕೂಡ ಒಳ್ಳೆಯ ನಿರ್ಧಾರ ಕೈಗೊಳ್ಳುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ಕ್ರೈಸ್ತ ಸಂಘಟನೆಯ ಪೇಜುಗಳನ್ನು ಫಾಲೋ ಮಾಡಿ: ಯೂಟ್ಯೂಬ್ | ಇನ್ಸ್ಟಾಗ್ರಮ್ | ಫೇಸ್ಬುಕ್ | ಶೇರ್ ಚಾಟ್ | ಎಕ್ಸ್ | ವಾಟ್ಸಾಪ್
Fact Check: ಪಾಕಿಸ್ತಾನದಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರನ್ನು ಥಳಿಸುತ್ತಿರುವುದನ್ನು ವೈರಲ್ ವಿಡಿಯೋ ತೋರಿಸಿಲ್ಲ; 2022 ರಲ್ಲಿ ಭಾರತದ ಭೋಪಾಲ್ ನಿಂದ | ಇದನ್ನು ಓದಿ
ತಮಿಳುನಾಡಿನಲ್ಲಿ ಕ್ರೈಸ್ತ ಮತಾಂತರ ಚಟುವಟಿಕೆ ಗಂಭೀರವಾದದ್ದು: ಆರ್‌ಎಸ್‌ಎಸ್ | ಇದನ್ನು ಓದಿ
ಇಂತಹ ಹೆಚ್ಚಿನ ಸುದ್ದಿಗಳಿಗೆ ನಮ್ಮ ವಾಟ್ಸಪ್ ಚಾನೆಲ್ ಫಾಲೋ ಮಾಡಿ

0 Comments