ಆರೋಗ್ಯ, ಶಿಕ್ಷಣಕ್ಕೆ ಕ್ರೈಸ್ತರ ಕೊಡುಗೆ ಅಪಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

 

ಸೇಂಟ್ ಮೇರೀಸ್ ಬೆಸಿಲಿಕಾ ಚರ್ಚ್ ವಾರ್ಷಿಕ ಉತ್ಸವ
ಶಿವಾಜಿನಗರದ ಸೇಂಟ್‌ ಬೆಸಿಲಿಕಾ ಚರ್ಚ್ ಆವರಣದಲ್ಲಿ ನಡೆದ ಸೇಂಟ್ ಮೇರೀಸ್ ಜನ್ಮದಿನದ ಹಬ್ಬದ ಆಚರಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ಉದ್ಘಾಟಿಸಿದರು. ಆರ್ಚ್ ಬಿಷಪ್ ಪೀಟರ್ ಮಚಾಡೊ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಶಾಸಕ ರಿಜ್ವಾನ್ ಅರ್ಷದ್ ಪಾಲ್ಗೊಡಿದ್ದರು

ಬೆಂಗಳೂರು: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಧರ್ಮೀಯ ಸಂಸ್ಥೆಗಳ ಮತ್ತು ಕ್ರೈಸ್ತ ಧರ್ಮಗುರುಗಳ ಕೊಡುಗೆ ಮಹತ್ತರವಾದುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಿವಾಜಿನಗರದ ಐತಿಹಾಸಿಕ ಸೇಂಟ್ ಮೇರೀಸ್ ಬೆಸಿಲಿಕಾ ಚರ್ಚ್‌ನಲ್ಲಿ ಭಾನುವಾರ ನಡೆದ ಸಂತ ಮೇರಿ ಅಮ್ಮನ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೈಸ್ತ ಸಮುದಾಯದ ಸಾಮಾಜಿಕ ಕಾರ್ಯಗಳು ಎಲ್ಲರಿಗೂ ಮಾದರಿ. ಶಿವಾಜಿನಗರದ ಬೆಸಿಲಿಕಾ ಚರ್ಚ್‌ ಚಾರಿತ್ರಿಕವಾಗಿ ಸೌಹಾರ್ದ ಮಂದಿರವಾಗಿದೆ. ಎಲ್ಲ ಜಾತಿಯ, ಎಲ್ಲ ಧರ್ಮದವರು ಈ ಪ್ರಾರ್ಥನಾ ಮಂದಿರಕ್ಕೆ ನಿರಂತರವಾಗಿ ಬಂದು ಹೋಗುತ್ತಿರುವುದೇ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂದು ಬಣ್ಣಿಸಿದರು.

ಬೆಸಿಲಿಕಾ ಚರ್ಚ್‌ನ ಪುನರುಜ್ಜೀವನಕ್ಕೆ ₹ 5 ಕೋಟಿ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಕರ್ನಾಟಕವು ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆಯಾಗಿದೆ. ಕಪಟಿಗಳ ದ್ವೇಷದ ಪಿತೂರಿಗೆ ಮಹನೀಯರ ಮಾನವೀಯ ಆಶಯಗಳು ಬಲಿಯಾಗಬಾರದು. ಪರಸ್ಪರ ಸಹಬಾಳ್ವೆ, ಸೌಹಾರ್ದದ ಬೆಸುಗೆಯನ್ನು ಗಟ್ಟಿಗೊಳಿಸಬೇಕು ಎಂದು ಆಶಿಸಿದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಧರ್ಮಕ್ಷೇತ್ರದ ಆರ್ಚ್ ಬಿಷಪ್ ಪೀಟರ್ ಮಚಾಡೊ ಸಾನ್ನಿಧ್ಯ ವಹಿಸಿದ್ದರು.

ಕ್ರೈಸ್ತ ಸಂಘಟನೆಯ ಪೇಜುಗಳನ್ನು ಫಾಲೋ ಮಾಡಿ: ಯೂಟ್ಯೂಬ್ ಇನ್ಸ್ಟಾಗ್ರಮ್ ಫೇಸ್ಬುಕ್ ಶೇರ್ ಚಾಟ್ | ಎಕ್ಸ್ ವಾಟ್ಸಾಪ್

➤ಗೋವಾದಲ್ಲಿ ಕ್ರೈಸ್ತರ ಸಂಖ್ಯೆ ಕುಸಿಯುತ್ತಿದ್ದು, ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ | ರಾಜ್ಯಪಾಲ ಪಿ.ಎಸ್‌. ಶ್ರೀಧರನ್‌ ಪಿಳ್ಳೈ | ಇದನ್ನು ಓದಿ

Fact Check: ಪಾಕಿಸ್ತಾನದಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರನ್ನು ಥಳಿಸುತ್ತಿರುವುದನ್ನು ವೈರಲ್ ವಿಡಿಯೋ ತೋರಿಸಿಲ್ಲ; 2022 ರಲ್ಲಿ ಭಾರತದ ಭೋಪಾಲ್ ನಿಂದ | ಇದನ್ನು ಓದಿ

ತಮಿಳುನಾಡಿನಲ್ಲಿ ಕ್ರೈಸ್ತ ಮತಾಂತರ ಚಟುವಟಿಕೆ ಗಂಭೀರವಾದದ್ದು: ಆರ್‌ಎಸ್‌ಎಸ್‌ | ಇದನ್ನು ಓದಿ

 ಇಂತಹ ಹೆಚ್ಚಿನ ಸುದ್ದಿಗಳಿಗೆ ನಮ್ಮ ವಾಟ್ಸಪ್ ಚಾನೆಲ್ ಫಾಲೋ ಮಾಡಿ  

Post a Comment

0 Comments