ಆಟೋ ರಾಜ ರವರ ಆಶ್ರಮದಲ್ಲಿ ಅವರ ನೇತೃತ್ವದಲ್ಲಿ ಅತ್ಯದ್ಭುತವಾಗಿ ನಡೆದ ಕರ್ನಾಟಕ ಕ್ರೈಸ್ತ ಸಂಘಟನೆ ಅಧ್ಯಕ್ಷರಾದ ಸಹೋದರ ಸ್ಟ್ಯಾನಿ ಪಿಂಟೋ ರವರ ಹುಟ್ಟುಹಬ್ಬ
ಅವರ ಫೇಸ್ಬುಕ್ನಲ್ಲಿ ಹುಟ್ಟು ಹಬ್ಬ ಕಾರ್ಯಕ್ರಮದ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ
ಆಗಸ್ಟ್ 12ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೂ ಆಟೋರಾಜ ಅವರ ನೇತೃತ್ವದಲ್ಲಿ ಆಶ್ರಮದಲ್ಲಿ ಹುಟ್ಟುಹಬ್ಬ ಯಶಸ್ವಿಯಾಗಿ ನಡೆಯಿತು ಅದೇ ರೀತಿಯಲ್ಲಿ ಸಂಜೆ ಆರರಿಂದ ರಾತ್ರಿ ಹತ್ತು ಗಂಟೆಯವರೆಗೆ ಸಹೋದರ ಸ್ಟ್ಯಾನಿ ಪಿಂಟೋ ರವರ ಮನೆಯಲ್ಲಿ ಕರ್ನಾಟಕ ಕ್ರೈಸ್ತ ಸಂಘಟನೆ ಎಲ್ಲಾ ಕಾರ್ಯಕರ್ತರ ಸದಸ್ಯರ ಮತ್ತು ಬಂಧು ಮಿತ್ರರ ನೇತೃತ್ವದಲ್ಲಿ ಹುಟ್ಟುಹಬ್ಬವನ್ನು ಯಶಸ್ವಿಯಾಗಿ ಆಚರಿಸಲಾಯಿತು
ಕೆಸಿಎಸ್ ಪ್ರಾರ್ಥನಾ ತಂಡದ ಅನೇಕ ಸದಸ್ಯರು ಆಗಸ್ಟ್ 12ರ ತಡರಾತ್ರಿಯಲ್ಲಿ ಮುಂಚಿತವಾಗಿ ಸಹೋದರ ಸ್ಟ್ಯಾನಿ ಪಿಂಟೋ ರವರ ಮನೆಯಲ್ಲಿ ಪ್ರಾರ್ಥನೆಯ ಮೂಲಕ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಆಚರಿಸಿದರು
🌸 ಎಲ್ಲರಿಗೂ ಧನ್ಯವಾದಗಳು 🌸
✝️ದೇವರು ನಾಮಕ್ಕೆ ಸ್ತೋತ್ರ ವಾಗಲಿ✝️
ಕರ್ತನಾದ ಯೇಸು ಕ್ರಿಸ್ತನ ಹೆಸರಿನ ಮೂಲಕ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ.
ನನ್ನ ಆತ್ಮೀಯ ಎಲ್ಲಾ ಸಹೋದರ ಸಹೋದರಿಯರೇ ಯಾರೆಲ್ಲ ನನ್ನ ಹುಟ್ಟುಹಬ್ಬಕ್ಕಾಗಿ ಪ್ರಾರ್ಥಿಸಿ ಶುಭ ಹಾರೈಸಿದ್ದೀರಾ ನಿಮ್ಮೆಲ್ಲರಿಗೂ ಕೂಡ ಧನ್ಯವಾದಗಳು ಮತ್ತು ಹಲವಾರು ಜನ ಹುಟ್ಟುಹಬ್ಬಕ್ಕೆ ಬಂದು ಶುಭ ಹಾರೈಸಿದ್ದೀರಾ ನನಗಾಗಿ ನನ್ನ ಕುಟುಂಬಕ್ಕಾಗಿ ಸೇವೆಗಾಗಿ ಪ್ರಾರ್ಥಿಸಿದ್ದೀರಾ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ.
ವಿಶೇಷವಾಗಿ ಕರ್ತನಾದ ಯೇಸು ಕ್ರಿಸ್ತನಿಗೆ ಜಯವಾಗಲಿ, ಆತನ ಕೃಪೆಯಿಂದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ.
ಹಾಗೆಯೇ ನನ್ನ ಆತ್ಮೀಯರು ಮತ್ತು ಅಣ್ಣನ ಸಮಾನರು ಆಗಿರುವ ಆಟೋ ರಾಜ ಅಣ್ಣಾರವರಿಗೆ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ ದೇವರು ಇವರ ಸೇವೆಯನ್ನು ಆಶೀರ್ವದಿಸಲಿ.
ನನ್ನ ಹುಟ್ಟುಹಬ್ಬವನ್ನು ಅವರ ಆಶ್ರಮದಲ್ಲಿ ಯಶಸ್ವಿಯಾಗಿ ನಡೆಯಲು ಅವರೇ ಕಾರಣರಾಗಿದ್ದಾರೆ, ನನ್ನನ್ನು ಮತ್ತು ನಮ್ಮ ಕೆಸಿಎಸ್ ತಂಡವನ್ನು ಕರೆದು ನನ್ನ ಹುಟ್ಟುಹಬ್ಬವನ್ನು ಅದ್ಭುತ ಕರ ರೀತಿಯಲ್ಲಿ ಆಶ್ರಮದಲ್ಲಿ ನಡೆಸಿ ಕೊಟ್ಟಿದ್ದಾರೆ ಅವರ ಮುಂದಾಳತ್ವದಲ್ಲಿ ದೇವರ ಕೃಪೆಯಿಂದ ಚೆನ್ನಾಗಿ ನಡೆಯಿತು.
ಆಶ್ರಮದಲ್ಲಿ 800 ಜನ ಆಟೋ ರಾಜ ಅಣ್ಣ ರವರ ಆಶ್ರಯದಲ್ಲಿ ಜೀವನ ಸಾಗಿಸುತ್ತಿದ್ದಾರೆ ಅವರ ಮಧ್ಯದಲ್ಲಿ ನನ್ನ ಹುಟ್ಟುಹಬ್ಬ ನಡೆಯುವುದು ನಿಜವಾಗಿಯೂ ಸಂತೋಷಕರದ ವಿಷಯ ದೇವರು ಅವರೆಲ್ಲರನ್ನು ಆಶೀರ್ವದಿಸಲಿ.
ನನ್ನ ಹುಟ್ಟು ಹಬ್ಬದ ದಿನ ಚಿತ್ರದುರ್ಗ ಜಿಲ್ಲೆಯಿಂದ ಆಗಮಿಸಿ ದೇವರ ವಾಕ್ಯ ಸಂದೇಶವನ್ನು ಹಂಚಿದ ನನ್ನ ಆತ್ಮೀಯ ದೇವ ಸೇವಕರಾಗಿರುವ ಪಾಸ್ಟರ್ ಅಲೆಕ್ಸಾಂಡರ್ ಅಯ್ಯಾ ರವರಿಗೆ ಮತ್ತು ಜೊತೆಗಾರರಿಗೆ ಹಾಗೂ ವಿಶೇಷವಾಗಿ ಅತ್ಯದ್ಭುತಕರವಾಗಿ ಆರಾಧನೆಯನ್ನು ನಡೆಸಿಕೊಟ್ಟ ಆತ್ಮೀಯ ದೇವ ಸೇವಕರಾದ ಫಾಸ್ಟರ್ ರಾಬರ್ಟ್ ವಿನ್ಸೆಂಟ್ ರವರಿಗೂ ಕೂಡ ಹೃದಯಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇನೆ.
ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದ ನಾನಾ ಭಾಗದಿಂದ ಆಗಮಿಸಿದ ನನ್ನ ಎಲ್ಲಾ ಕೆಸಿಎಸ್ ತಂಡದ ಕಾರ್ಯಕರ್ತರಿಗೂ ಪ್ರಾರ್ಥನಾ ತಂಡವನ್ನು ನಡೆಸಿಕೊಡುವ ಎಲ್ಲಾ ಲೀಡರ್ಸ್ ಗಳಿಗೂ ಮತ್ತು ನನ್ನ ಎಲ್ಲಾ ಬಂಧು ಮಿತ್ರರಿಗೂ ನನ್ನ ಹಾಗೂ ನನ್ನ ಕುಟುಂಬದ ವತಿಯಿಂದ ಹೃದಯಪೂರ್ವಕ ವಂದನೆಯನ್ನು ಸಲ್ಲಿಸುತ್ತೇನೆ.
ಮತ್ತು ವಿಶೇಷವಾಗಿ ಯಾವುದೇ ಸಮಸ್ಯೆಯಾಗದೆ ಎಲ್ಲವೂ ಯಶಸ್ವಿಯಾಗಿ ನಡೆದಿದೆ ಈ ಎಲ್ಲಾ ಕಾರ್ಯಗಳು ಯಶಸ್ವಿಯಾಗಲು ಮುಖ್ಯವಾಗಿ ಕೆಸಿಎಸ್ ತಂಡದ ಲೀಡರ್ಸ್ ಗಳು ಕಾರಣರಾಗಿದ್ದಾರೆ ಎಲ್ಲವನ್ನು ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಂಡಿದ್ದಾರೆ, ಕಡೆಯವರೆಗೂ ನಿಂತುಕೊಂಡು ಯಶಸ್ವಿಯಾಗಲು ಕಾರಣಕರ್ತರಾಗಿದ್ದಾರೆ, ದೇವರು ಇವರೆಲ್ಲರನ್ನೂ ಕೂಡ ಆಶೀರ್ವದಿಸಲಿ.
ಮತ್ತೊಮ್ಮೆ ಕರ್ತನಾದ ಯೇಸು ಕ್ರಿಸ್ತನಿಗೆ ವಂದನೆಗಳನ್ನು ಸಲ್ಲಿಸುತ್ತೇನೆ.✝️
ಎಲ್ಲರಿಗೂ ಧನ್ಯವಾದಗಳು💐
ನಿಮ್ಮ ಸಹೋದರ
Stany Pinto - ಸ್ಟ್ಯಾನಿ ಪಿಂಟೋ
🔥ಕರ್ನಾಟಕ ಕ್ರೈಸ್ತ ಸಂಘಟನೆ🔥
ಅಧ್ಯಕ್ಷರು
ಹುಟ್ಟು ಹಬ್ಬದ ಫೋಟೋಗಳನ್ನು ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ 👉
https://photos.app.goo.gl/ZcZs3QeK41piTZun8

0 Comments