ತನಿಖೆ ಅಗತ್ಯವಿದೆ: ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ

ತಿರುವನಂತಪುರ: ಗೋವಾದಲ್ಲಿ ಕ್ರೈಸ್ತರ ಸಂಖ್ಯೆ ಕುಸಿಯುತ್ತಿದ್ದು, ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ, ಈ ಬಗ್ಗೆ ಕಾರಣ ತಿಳಿಯಲು ಒಂದು ಸಕಾರಾತ್ಮಕ ತನಿಖೆ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಕೊಚ್ಚಿಯ ಚರ್ಚ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀಧರನ್ ಪಿಳ್ಳೈ, ಬಿಷಪ್‌ಗಳು ಕ್ರೈಸ್ತರ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
‘ಗೋವಾದಲ್ಲಿ ಕ್ರೈಸ್ತರ ಜನಸಂಖ್ಯೆಯು ಶೇಕಡಾ 36ರಿಂದ 25ಕ್ಕೆ ಇಳಿದಿದೆ. ಆದರೆ, ಮುಸ್ಲಿಂ ಜನಸಂಖ್ಯೆಯು ಶೇ 3ರಿಂದ ಶೇ 12ಕ್ಕೆ ಏರಿಕೆಯಾಗಿದೆ. ಬಿಷಪ್‌ಗಳು ಈ ಬಗ್ಗೆ ಸಕಾರಾತ್ಮಕವಾಗಿ ತನಿಖೆ ನಡೆಸಬಹುದು’ ಎಂದು ಪಿಳ್ಳೈ ಹೇಳಿದ್ದಾರೆ.
ನಂತರ ಮತ್ತೊಂದು ಸಮಾರಂಭದಲ್ಲಿ ಮಾತನಾಡಿರುವ ಪಿಳ್ಳೈ, ತಮ್ಮ ಹೇಳಿಕೆಯನ್ನು ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡು ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿದರು.
ಕ್ರೈಸ್ತರ ಜನಸಂಖ್ಯೆಯ ಕುಸಿತದ ಕಾರಣಗಳ ಬಗ್ಗೆ ತಿಳಿಯಲು ಸಕಾರಾತ್ಮಕವಾದ ತನಿಖೆ ಆಗಲಿ ಎನ್ನುವುದು ತಮ್ಮ ಬಯಕೆ. ಏಕೆಂದರೆ, ಈ ರೀತಿ ಒಂದು ಧರ್ಮದ ಜನಸಂಖ್ಯೆ ಕುಸಿಯಲು ಸುಶಿಕ್ಷಿತ ಜನರ ವಲಸೆ ಕೂಡ ಕಾರಣವಿರಬಹುದು ಎಂದೂ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಕ್ರೈಸ್ತ ಸಂಘಟನೆಯ ಪೇಜುಗಳನ್ನು ಫಾಲೋ ಮಾಡಿ: ಯೂಟ್ಯೂಬ್ | ಇನ್ಸ್ಟಾಗ್ರಮ್ | ಫೇಸ್ಬುಕ್ | ಶೇರ್ ಚಾಟ್ | ಎಕ್ಸ್ | ವಾಟ್ಸಾಪ್
➤ಬೆಸಿಲಿಕಾ ಚರ್ಚ್‌ನ ಪುನರುಜ್ಜೀವನಕ್ಕೆ ₹ 5 ಕೋಟಿ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. | ಇದನ್ನು ಓದಿ
➤Fact Check: ಪಾಕಿಸ್ತಾನದಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರನ್ನು ಥಳಿಸುತ್ತಿರುವುದನ್ನು ವೈರಲ್ ವಿಡಿಯೋ ತೋರಿಸಿಲ್ಲ; 2022 ರಲ್ಲಿ ಭಾರತದ ಭೋಪಾಲ್ ನಿಂದ | ಇದನ್ನು ಓದಿ
➤ತಮಿಳುನಾಡಿನಲ್ಲಿ ಕ್ರೈಸ್ತ ಮತಾಂತರ ಚಟುವಟಿಕೆ ಗಂಭೀರವಾದದ್ದು: ಆರ್‌ಎಸ್‌ಎಸ್ | ಇದನ್ನು ಓದಿ

0 Comments