ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ

 ರೇಷ್ಮೆನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಫಲಾನುಭವಿಗಳನ್ನು ಪ್ರೋತ್ಸಾಹಿಸಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವಸಲುವಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಅಗತ್ಯವಿರುವ ದುಡಿಮೆ ಬಂಡವಾಳ (working capital) ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ನಿಗಮದಿಂದ ರೂ.2.00ಲಕ್ಷದವರೆಗೆ ಸಾಲ ಸಹಾಯಧನ ಒದಗಿಸಲಾಗುವುದು. ಇದರಲ್ಲಿ ಶೇ.50 ಸಹಾಯಧನವಾಗಿರುತ್ತದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಹತೆ

  1. ಫಲಾನುಭವಿಗಳು ರಾಜ್ಯದ ಮತೀಯ ಅಲ್ಪಸಂಖ್ಯಾತರಾಗಿರತಕ್ಕದ್ದು
  2. ಫಲಾನುಭವಿಗಳು ರಾಜ್ಯದ ಖಾಯಂ ನಿವಾಸಿಯಾಗಿರತಕ್ಕದ್ದು
  3. ಫಲಾನುಭವಿಗಳ ವಯಸ್ಸು 18 ರಿಂದ 55 ವರ್ಷಗಳಾಗಿರತಕ್ಕದ್ದು
  4. ಕುಟುಂಬದ ವಾರ್ಷಿಕ ಆದಾಯವು ರೂ. 6.00 ಲಕ್ಷ ಮೀರಿರಬಾರದು
  5. ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರು ಕೇಂದ್ರ ಅಥವಾ ರಾಜ್ಯ ಸರ್ಕಾರ ನೌಕರಿಯಲ್ಲರಬಾರದು
  6. ಅರ್ಜಿದಾರರ ಅಥವಾ ಅವರ ಕುಟುಂಬದ ಸದಸ್ಯರು ಅರಿವು ಮತ್ತು ವಿದೇಶ ವಿದ್ಯಾಭ್ಯಾಸ ಸಾಲ ಯೋಜನೆ ಹೊರತುಪಡಿಸಿ ಕಳೆದ 5 ವರ್ಷಗಳಲ್ಲಿ ನಿಗಮದಿಂದ ಯಾವುದೇ ಸಾಲ /ಸಹಾಯಧನ ಸೌಲಭ್ಯ ಪಡೆದಿರಬಾರದು.
  7. ಅರ್ಜಿದಾರರು ನಿಗಮದ ಸುಸ್ಥಿದಾರರಾಗಿರಬಾರದು
ಅಗತ್ಯ ಇರುವ ದಾಖಲೆಗಳು
  • ಫಲಾನುಭವಿಗಳ ಇತ್ತೀಚಿ ಪಾಸ್‌ ಪೋರ್ಟ್‌ ಭಾವ ಚಿತ್ರ
  • ಚಾಲ್ತಿಯಲ್ಲಿರುವ ಅಲ್ಪಸಂಖ್ಯಾತ ಪ್ರಮಾಣ ಪತ್ರ
  • ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ
  • ಆಧಾರ್‌ ಕಾರ್ಡ್‌ ಪ್ರತಿ
  • ಫಲಾನುಭವಿಯ ಬ್ಯಾಂಕ್‌ ಬುಕ್‌ ಪ್ರತಿ
  • ಯೋಜನಾ ವರದಿ
  • ಸ್ವಯಂ ಘೋಷಣೆ ಪತ್ರ




Post a Comment

0 Comments