ಅಲ್ಪಸಂಖ್ಯಾತ ಸಮುದಾಯದ ಸ್ವ-ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕ ಸ್ವಾಲಂಬಿಯನ್ನಾಗಿ ಮಾಡುವ ಸಲುವಾಗಿ, ರಾಷ್ಟೀಕೃತ/ಶೆಡ್ಯೂಲ್ ಬ್ಯಾಂಕ್/RBI ನಿಂದ ಮಾನ್ಯತೆ ಪಡೆದ ವಿವಿಧ ಆರ್ಥಿಕ ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ಘಟಕವೆಚ್ಚದ ಶೇ.50 ಅಥವಾ ಗರಿಷ್ಠ ರೂ.2.00 ಲಕ್ಷ ಸಹಾಯಧನವನ್ನು ನಿಗಮದಿಂದ ಒದಗಿಸಲಾಗುವುದು. ಸಹಾಯಧನವು ಬ್ಯಾಕ್‌ಎಂಡ್ ಸಬ್ಸಿಡಿಯಾಗಿದ್ದು ಸ್ವಸಹಾಯ ಸಂಘಗಳು ಆರ್ಥಿಕ ಬ್ಯಾಂಕ್‌ಗಳಿಂದ ಪಡೆದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಹತೆ
- ಯೋಜನೆಯಡಿ ಸಹಾಯಧನ ಪಡೆಯುವ ಸ್ವಸಹಾಯ ಸಂಘ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಾಗಿರತಕ್ಕದ್ದು
- ಮಹಿಳಾ ಸ್ವಸಹಾಯ ಸಂಘದ ಸದಸ್ಯರು ರಾಜ್ಯದ ಖಾಯಂ ನಿವಾಸಿಗಳಾಗಿರತಕ್ಕದ್ದು
- ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರ ಸಂಖ್ಯೆ 10 ರಿಂದ 20ರೊಳಗಿರಬೇಕು
- ಮಹಿಳಾ ಸ್ವಸಹಾಯ ಸಂಘದಲ್ಲಿ ಒಂದು ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಅವಕಾಶವಿರುತ್ತದೆ.
- ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಕುಟುಂಬದ ಆದಾಯ ರೂ.6.00 ಲಕ್ಷ ಮೀರಿರಬಾರದು
- ಸ್ವಸಹಾಯ ಸಂಘದ ಸದಸ್ಯರ ವಯಸ್ಸು 18 ರಿಂದ 55 ವರ್ಷಗಳ ಒಳಗಿರತಕ್ಕದ್ದು
- ಸ್ವಸಹಾಯ ಸಂಘವು ಕಡ್ಡಾಯವಾಗಿ ಉಪನೊಂದಾವಣಿ ಅಧಿಕಾರಿಯವರಿಂದ ನೊಂದಣಿಯಾಗಿರತಕ್ಕದ್ದು.
- ಸ್ವಸಹಾಯ ಸದಸ್ಯರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ ಸರ್ಕಾರದ ಉದ್ಯೋಗಿಗಳಾಗಿರಬಾರದು.
- ಸಂಘದ ಸದಸ್ಯರು ಅಥವಾ ಅವರ ಕುಟುಂಬದ ಸದಸ್ಯರು ಅರಿವು ಮತ್ತು ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ ಹೊರತುಪಡಿಸಿ ಕಳೆದ 5 ವರ್ಷಗಳಲ್ಲಿ ನಿಗಮದಿಂದ ಯಾವುದೇ ಸಾಲ/ಸಹಾಯಧನ ಸೌಲಭ್ಯ ಪಡೆದಿರಬಾರದು.
- ಸ್ವಸಹಾಯ ಸಂಘದ ಸದಸ್ಯರು ನಿಗಮದ ಸುಸ್ಥಿದಾರರಾಗಿರಬಾರದು
- ಮಹಿಳಾ ಸ್ವಸಹಾಯ ಗುಂಪು ನಿಯಮಿತವಾಗಿ ಸಭೆಗಳನ್ನು ನಡೆಸತಕ್ಕದ್ದು (ಕನಿಷ್ಠ ತಿಂಗಳಿಗೆ ಒಂದು ಸಭೆ).
- ಸ್ವಸಹಾಯ ಗುಂಪು ನಿಗದಿತವಾಗಿ ಉಳಿತಾಯ ಮಾಡುವುದು ಮತ್ತು ಸ್ವಸಹಾಯ ಗುಂಪಿನ ಉಳಿತಾಯದ ಮೊತ್ತದಿಂದ ಗುಂಪಿನ ಸದಸ್ಯರಿಗೆ ಅವಶ್ಯಕತೆಗೆ ತಕ್ಕಂತೆ ಆಂತರಿಕ ಸಾಲವನ್ನು ನೀಡುವುದು.
- ಆಂತರಿಕ ಸಾಲದ ಮರುಪಾವತಿಗೆ ಒತ್ತುನೀಡಿ ಸಾಲದ ಮರುಪಾವತಿ ಉತ್ತಮವಾಗಿರುವ ಸ್ವಸಹಾಯ ಸಂಘಗಳಿಗೆ ನಿಗಮದಿಂದ ಸಹಾಯಧನ ನೀಡಲು ಹೆಚ್ಚಿನ ಆದ್ಯತೆ ನೀಡಲಾಗುವುದು.
- ಸ್ವಸಹಾಯ ಗುಂಪಿನ, ದಾಖಲೆ ಪುಸ್ತಕಗಳನ್ನು ಸಮರ್ಪಕವಾಗಿ ನಿರ್ವಹಿಸುವುದು.
- ನಿಗಮದ ಸಹಾಯಧನ ಪಡೆಯಲು ಸ್ವಸಹಾಯ ಗುಂಪು ರಚನೆಯಾಗಿ ಕನಿಷ್ಠ 6 ತಿಂಗಳಾಗಿರಬೇಕು
ಅಗತ್ಯ ಇರುವ ದಾಖಲೆಗಳು

0 Comments