Congratulations & Happy Marriage Life to Sai Kiran & Rita Malathi
ಕರ್ನಾಟಕ ಕ್ರೈಸ್ತ ಸಂಘಟನೆ ವತಿಯಿಂದ ನೂತನ ವಧು ವರರಾದ ಸಹೋದರ ಸಾಯಿ ಕಿರಣ್ ಮತ್ತು ಸಹೋದರಿ ರೀಟಾ ಮಾಲತಿ ರವರಿಗೆ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ
ಆತ್ಮೀಯ ದೇವಸೇವಕರು ಆಗಿರುವ ಪಾಸ್ಟರ್ ಸಿ ರಾಮು ರವರು ಅವರ ಎರಡನೆಯ ಮಗ ಸಾಯಿಕಿರಣ್ ರವರ ಮದುವೆ ಕಾರ್ಯಕ್ರಮ ದೇವರ ಕೃಪೆಯಿಂದ ನಿಮ್ಮೆಲ್ಲರ ಪ್ರಾರ್ಥನೆಯಿಂದ ಅದ್ಭುತಕರವಾಗಿ ಆಶೀರ್ವಾದಕರವಾಗಿ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದಿಂದ ಹಲವಾರು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ದೇವಸೇವಕರು ಬಂದು ಮಿತ್ರರು ಆಗಮಿಸಿ ವಧುವರರಿಗೆ ಶುಭ ಹಾರೈಸಿದರು.
ಈ ಮದುವೆ ಕಾರ್ಯಕ್ರಮ ಬೆಂಗಳೂರಿನ ಲಿಂಗರಾಜಪುರದಲ್ಲಿರುವ ಇಂಡಿಯನ್ ಕ್ಯಾಂಪಸ್ ಕೃಸೈಡ್ ನಲ್ಲಿ ನಡೆಯಿತು.
ಕರ್ನಾಟಕ ಕ್ರೈಸ್ತ ಸಂಘಟನೆ ಅಧ್ಯಕ್ಷರಾದ ಸ್ಟ್ಯಾನಿ ಪಿಂಟೋ ರವರಿಗೆ ಮತ್ತು ಕೆಸಿಎಸ್ ತಂಡಕ್ಕೆ ಪ್ರೀತಿಯಿಂದ ಪಾಸ್ಟರ್ ಸಿ ರಾಮುರವರ ಆಹ್ವಾನಿಸಿದ ಮೇರೆಗೆ ಕೇಸಿಎಸ್ ತಂಡದ ಅನೇಕ ಕಾರ್ಯಕರ್ತರು ದೇವಸೇವಕರು ಮದುವೆ ಕಾರ್ಯಕ್ರಮಕ್ಕೆ ಭೇಟಿ ನೀಡಿ ಪ್ರಾರ್ಥಿಸಿ ಶುಭ ಹಾರೈಸಿದರು.
ಈ ಮದುವೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ ಕರ್ತನಾದ ಯೇಸುಕ್ರಿಸ್ತನಿಗೆ ಮಹಿಮೆ ಉಂಟಾಗಲಿ.


0 Comments