“ಸಮಸ್ಯೆ ಬಂದಾಗ ಮಾತ್ರ ಕ್ರೈಸ್ತ ಸಂಘಟನೆ ನೆನಪಾಗುತ್ತದೆ… ಸಮಸ್ಯೆ ಇಲ್ಲದಾಗ ಸಂಘಟನೆಯೊಂದಿಗೆ ನಿಲ್ಲುವವರು ಎಷ್ಟು ಜನ?”

ಸಮಸ್ಯೆ ಬಂದಾಗ ಮಾತ್ರ ಸಂಘಟನೆ ನೆನಪಾಗಬಾರದು!


ಒಬ್ಬ ಕ್ರೈಸ್ತನಿಗೆ ಅನ್ಯಾಯವಾದಾಗ, ಹಲ್ಲೆಯಾದಾಗ, ಸಂಕಷ್ಟ ಎದುರಾದಾಗ ಸಂಘಟನೆ ಬೇಕಾಗುತ್ತದೆ.

ಆದರೆ ಅದೇ ಸಂಘಟನೆ ಕ್ರೈಸ್ತ ಸಮುದಾಯದ ಹಕ್ಕುಗಳಿಗಾಗಿ ಹೋರಾಡುವಾಗ, ಸಭೆಗಳನ್ನು ನಡೆಸುವಾಗ, ಒಗ್ಗಟ್ಟಿಗಾಗಿ ಕರೆ ನೀಡುವಾಗ ನಾವು ಎಷ್ಟು ಜನ ಜೊತೆಯಾಗುತ್ತೇವೆ?

ಸಂಘಟನೆ ಎಂದರೆ ಕೇವಲ ಸಮಸ್ಯೆ ಪರಿಹರಿಸುವ ಕೇಂದ್ರವಲ್ಲ. ಅದು ನಮ್ಮ ಸಮುದಾಯದ ಧ್ವನಿ, ಶಕ್ತಿ ಮತ್ತು ಒಗ್ಗಟ್ಟಿನ ಸಂಕೇತ.

ನಮಗೆ ಸಮಸ್ಯೆ ಬಂದಾಗ ಸಂಘಟನೆ ನಮ್ಮೊಂದಿಗೆ ನಿಲ್ಲಬೇಕು ಎಂದು ಬಯಸುವ ನಾವು, ಸಂಘಟನೆಗೆ ನಮ್ಮ ಬೆಂಬಲ ಬೇಕಾದಾಗ ಅದರೊಂದಿಗೆ ನಿಲ್ಲುವುದೂ ನಮ್ಮ ಜವಾಬ್ದಾರಿ.

“ಸಮಸ್ಯೆ ಬಂದಾಗ ಸಂಘಟನೆಯನ್ನು ಹುಡುಕಬೇಡಿ; ಸಮಸ್ಯೆ ಬರುವ ಮುನ್ನವೇ ಸಂಘಟನೆಯ ಶಕ್ತಿಯಾಗಿ ನಿಲ್ಲಿ.”

📖 ಗಲಾತ್ಯದವರಿಗೆ 6:2

“ಒಬ್ಬರ ಭಾರವನ್ನು ಮತ್ತೊಬ್ಬರು ಹೊತ್ತುಕೊಳ್ಳಿರಿ.”

ಕರ್ನಾಟಕ ಕ್ರೈಸ್ತ ಸಂಘಟನೆ (ರಿ.)

ಬ್ರದರ್ ಸ್ಟ್ಯಾನಿ ಪಿಂಟೋ
ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು

ನಮ್ಮ ನಡೆ ನ್ಯಾಯದ ಕಡೆ



Post a Comment

0 Comments